Karnataka Christians

ಅರಸನಿಗೆ ನಿದ್ರೆ ಬಾರದ ರಾತ್ರಿ. ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆ ಬರಲಿಲ್ಲ; ಅದದರಿಂದ ಸ್ಮರಿಸತಕ್ಕ ಪೂರ್ವವೃತ್ತಾಂತಗಳ ಗ್ರಂಥವನ್ನು ಅವನು ತರಿಸಿ ಪಾರಾಯಣ ಮಾಡಿಸುತ್ತಿರುವಾಗ - (ಎಸ್ತೆರಳು 6:1).
.
ಎಷ್ಟು ಅಶ್ಚರ್ಯ, ಅದೇ ದಿನ ಸಂಚೆಯಲ್ಲಿ ವಂಚಕನಾದ ಹಾಮಾನನ್ನು ಮೊರ್ದೆಕೈಗಾಗಿ 5೦ ಮೊಳ ಎತ್ತರವಾದ ಗಲ್ಲು ಮರವನ್ನು ಸಿದ್ಧಮಾಡಿದನು.ಮರುದಿನ ಬೆಳಗೆ ಅರಸನ ಬಳಿ ಹೇಳಿ ಅವನನ್ನು ಗಲ್ಲುಮರಕ್ಕೆ ಹಾಕ್ಕಿಸಬೇಕೆಂಬ ಯೋಜನೆಯಿಂದ ಅವನು ಆ ಗಲ್ಲು ಮರವನ್ನು ಸಿದ್ದಮಾಡಿದನು.(ಎಸ್ತೇರಳು 5:14)
.
ಕರ್ತನ ಕೆಲಸ ನೋಡಿರಿ, ಅವನು ನೆನಸಿರಬಹುದು, ತಾನು ಮಾಡಿದ ಯೋಜನೆಯನ್ನು ಯಾರು ಮಾರ್ಪಡಿಸುವದಕ್ಕಾಗುವುದಿಲ್ಲ, ನಾನು ಬೆಳಗೆ ಹೋಗಿ ನನ್ನ ಯೋಜನೆಯನ್ನು ನೆರವೇರಿಸುವೆ ಎಂದು ನೆನಸಿದವನಾಗಿ ಅವನು ಆ ರಾತ್ರಿಯನ್ನು ಕೆಳೆದಿರಬಹುದು. ಅದರೆ ಆ ರಾತ್ರಿಯೊಳ್ಳಗೆ ದೇವರು ಎಲ್ಲಾವನ್ನು ಮಾರ್ಪಡಿಸಿದರು.
.
ದೇವರು ಎಲ್ಲಾವನ್ನು ಅರಿತವರು, ಅದರೆ ಅರಸನಿಗೆ ಹಾಮಾನನ ಯೋಜನೆ, ಗಲ್ಲು ಮರವನ್ನು ಸಿದ್ಧಮಾಡಿದ್ದು ಗೊತ್ತಿಲ್ಲ, ರಾಜಸ್ತ್ರೀ ಎಸ್ತೇರಳಿಗೂ ಗೊತ್ತಿಲ್ಲ, ಮತ್ತು ಮೊರ್ದೆಕೈಗೂ ಗೊತ್ತಿಲ್ಲ. ಅದರೆ ದೇವರ ಮುಂದೆ ರಹಸ್ಯವಾಗಿರುವುದು ಯಾವುದು ಇಲ್ಲ. ಕರ್ತನು ಕ್ರಿಯೆ ಮಾಡಲು ಆರಂಭಿಸಿದನು. ನೀವು ದೇವರ ಮಕ್ಕಳಾಗಿದ್ದರೆ ನಿಮಗೆ ಬರುವ ಅಪತ್ತುಗಳು ನೀವು ಅರಿಯದೆ ಇರಬಹುದು. ಅದರೆ ದೇವರು ಅರಿತವರಾಗಿದ್ದಾರೆ. ಅವರು ನಿಮಗಾಗಿ ಕ್ರಿಯೆ ಮಾಡುವರು. ಅವರು ನಿಮಗಾಗಿ ಯುದ್ಧಮಾಡುವರು. ನಿಮ್ಮ ಜೀವಿತದಲ್ಲಿ ನಡೆಯುವ ಎಲ್ಲಾ ಕಾರ್ಯಗಳನ್ನು ಅರಿತವರಾಗಿದ್ದಾರೆ. ಅವರು ನಮ್ಮ ಜೀವಿತದಲ್ಲಿ ನಡೆದ, ನಡೆಯುವ, ನಡೆಯಬೇಕಾಗಿರುವ ಪ್ರತಿಯೊಂದು ಕಾರ್ಯಗಳನ್ನು ಅರಿತವರಾಗಿದ್ದಾರೆ.
.
ಕರ್ತನ ಅಂದವಾದ ಕಾರ್ಯವನ್ನು ನೋಡಿರಿ. ಆ ರಾತ್ರಿ ರಾಜನಿಗೆ ದೇವರು ನಿದ್ರೆ ಬರದಂತೆ ಮಾಡಿದರು. ಅರಸನು ಸ್ಮರಿಸತಕ್ಕ ಪೂರ್ವವೃತ್ತಾಂತಗಳ ಗ್ರಂಥವನ್ನು ತರಿಸಿ ಪಾರಾಯಣ ಮಾಡಿಸುತ್ತಿರುವಾಗ ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್, ತೆರೆಷ್ ಎಂಬಿಬ್ಬರು ರಾಜ ಕಂಚುಕಿಗಳು ಒಳಸಂಚು ಮಾಡಿದ ಸಂಗತಿಯೂ, ಅದು ಮೊರ್ದೆಕೈಯ ಮುಖಾಂತರ ಬೈಲಿಗೆ ಬಂದ ಸಂಗತಿಯೂ ಅದರಲ್ಲಿ ಸಿಕ್ಕಿದವು. ಆಗ ಅರಸನು ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವೆಂದು ವಿಚಾರಿಸಿದಾಗ ಅವನ ಸಾನಿಧ್ಯ ಸೇವಕರು ಏನೂ ದೊರಕಲಿಲ್ಲ ಎಂದು ಅರಸನಿಗೆ ತಿಳಿಸಿದರು.
.
ಮರುದಿನ ಬೆಳಗೆ ಹಾಮಾನನ್ನು ಮೊರ್ದೆಕೈಯನ್ನು ನೇತುಹಾಕ್ಕಿಸುವದಕ್ಕೆ ಅರಸನ
ಅಪ್ಪಣೆಯನ್ನು ಪಡಕೊಳ್ಳಬೇಕೆಂದು ಬಂದಿದ್ದನು. ಅರಸನು ಅವನನ್ನು ಒಳಗೆ ಕರೆದು,
ಹಾಮಾನನು ಮಾತನಾಡಲು ಆರಂಭಿಸುವುದಕ್ಕೆ ಮುಂಚೆಯೇ, ಅರಸನು ಅವರ ಬಳಿ ಯಾವನನ್ನು ಸನ್ಮಾನಿಸಬೇಕೆಂದು ಇಷ್ಟವುಳ್ಳವನಾಗಿರುತ್ತಾನೋ ಅಂಥವನಿಗೆ ಮಾಡತಕ್ಕದ್ದೇನು ಎಂದು ಕೇಳಿ, ಅದರಂತೆ ಮೊರ್ದಕೈಗೆ ಮಾಡಬೇಕೆಂದು ಹೇಳುವಾಗ ಅದು ಅವನ ಜೀವಿತದಲ್ಲಿ ಬಹಳ ದೊಡ್ಡ ಅಶ್ಚರ್ಯವಾಗಿ ಇತ್ತು. ಯಾರನ್ನು ಅವನ್ನು ನೇತು ಹಾಕ್ಕಿಸಬೇಕೆಂದು ರಾಜನ ಬಳಿ ಬಂದಿದನೋ, ಅದೇ ಮನುಷ್ಯನನ್ನು ನಗರ ಬೀದಿಗಳಲ್ಲಿಯೂ, ಎಲ್ಲಾ ಸನ್ಮಾನಗಳಿಂದ ಘನಪಡಿಸಬೇಕೆಂದು ಅರಸನು ಅಪ್ಪಣೆ ಮಾಡಿದನು.
.
ದೇವರು ಮೊರ್ದೆಕೈಯನು ಗಲ್ಲುಕಂಬಕೆ ಹಾಕ್ಕದಂತೆ ಕಾಯ್ದು, ನಗರವೇ ಭ್ರಮಿಸುವಂತೆ ಅವನನ್ನು ಘನಪಡಿಸಿದ್ದು ಮಾತ್ರವಲ್ಲ, ಅವನಿಗೆ ವಿರೋಧವಾಗಿ ಬಂದ ಹಾಮಾನನು, ಮೊರ್ದೆಕೈಗಾಗಿ ಸಿದ್ಧಮಾಡಿದ ಅದೇ ಗಲ್ಲುಮರದಲ್ಲಿ ಗಲ್ಲಿಗೆ ಹಾಕ್ಕುವಂತೆ ಮಾಡಿದರು. ನಮ್ಮ ಜೀವತವು ಕಾಲವು ದೇವರ ಕರಗಳಲ್ಲಿ ಇರುತ್ತದೆ.
.
ಒಂದು ವೇಳೆ, ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ವಿರೋಧವಾದ ಕಾರ್ಯಗಳನ್ನು
ಮಾಡುವವರಿದ್ದಾರ ? ಅಲ್ಲದೆ, ನಿಮ್ಮ ಕುಟುಂಬದಲ್ಲಿ ವಿರೋಧವಾದ ಕಾರ್ಯಗಳನ್ನು
ಮಾಡುವವರಿದ್ದಾರ ? ನೀವು ದೇವರ ಮಕ್ಕಳಾಗಿರುವುದರಿಂದ ಚಿಂತೆ ಮಾಡುವ ಅವಶ್ಯವಿಲ್ಲ. ನಿಮಗೆ ವಿರೋಧವಾಗಿ ನಿಲ್ಲುವವರ ಯೋಜನೆಗಳನ್ನು ನೀವು ಅರಿಯದೆ ಇರಬಹುದು, ಅದರೆ ಎಲ್ಲಾವನ್ನು ಅರಿತ ದೇವರು ನಿಮಗಾಗಿ ಕಾರ್ಯಸಾಧಿಸುತ್ತಾರೆ. ನಿಮ್ಮನ್ನು ಕಾಯುವುದು ಮಾತ್ರವಲ್ಲ, ನೀವು ಕೆಲಸ ಮಾಡುವ ಸ್ಥಳದಲ್ಲಿ, ಯಾವುದೋ ಒಂದು ಕಾರಣದಿಂದ ನೀವು ತಗ್ಗಿಸಿ ಕೊಂಡಿದ್ದೀರಿ. ಆ ಸ್ಥಳದಲ್ಲಿಯೇ ಕರ್ತನು ನಿಮ್ಮನ್ನು ಘನಪಡಿಸಿ ಉನ್ನತ ಸ್ಥಾನದಲ್ಲಿ ಇಡುತ್ತಾರೆ. ನನ್ನ ದೇವರಿಂದ ಆಸಾಧ್ಯವಾದ ಕಾರ್ಯ ಯಾವುದು ಇಲ್ಲ. ನಿಮಗೆ ವಿರೋಧವಾಗಿ ಬರುವವರು ಏನೂ ಇಲ್ಲದೆ ಹೋಗುವರು. ಅವರು ನಿಮಗೆ ವಿರೋಧವಾಗಿ ಮಾಡುವ ಯಾವ ಕಾರ್ಯವು ಸಫಲವಾಗದಂತೆ ಮಾಡುವುದಕ್ಕೆ ನಮ್ಮ ದೇವರು ಶಕ್ತರಾಗಿದ್ದಾರೆ.
.
ಈ ರೀತಿಯ ಅತಿಶಯವಾದ ದೇವರನ್ನು ನಾವು ಹೊಂದಿಕೊಂಡಿರುವುದು ನಾವು ಎಷ್ಟು
ಭಾಗ್ಯವಂತರು. ಅದುದರಿಂದ ಯಾವುದನ್ನು ಕುರಿತು ಚಿಂತೆಮಾಡಬೇಡಿರಿ. ಕರ್ತನ ಬಳಿ
ನಿಮ್ಮ ಜೀವಿತವನ್ನು ಒಪ್ಪಿಸಿಕೊಟ್ಟು ಅವರ ಕೆಲಸಗಾಗಿ ತಾಳ್ಮೆಯಿಂದ ಕಾಯ್ದುಕೊಳ್ಳಿ.
ಕರ್ತನು ನಿಮಗಾಗಿ ಯುಧ್ದಮಾಡುತ್ತಾರೆ. ಅವರನ್ನು ನಂಬಿ ಜೀವಿಸುವ ನಮ್ಮನ್ನು
ಬೇರೆಯವರ ಮುಂದೆ ಆಶಭಂಗಪಡಿಸದಂತೆ ಒಂದು ದಿನವು ದೇವರು ಅನುಮತಿಸುವುದಿಲ್ಲ.
ಅವರು ನಮಗಾಗಿ ಕಾರ್ಯಗಳನ್ನು ಮಾಡುತ್ತಾರೆ. ಅವರ ಕ್ರಿಯೆಗಳು ಮಹತ್ವವಾದದ್ದು.
ಆತನು ಅಪ್ರಮೇಯಮಹಾಕಾರ್ಯಗಳನ್ನೂ ಅಸಂಖ್ಯವಾದ ಅದ್ಭುತಕೃತ್ಯಗಳನ್ನೂ
ಮಾಡುತ್ತಾನೆ; ಭೂಮಿಯ ಮೇಲೆ ಮಳೆಸುರಿಸಿ ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ.
(ಯೋಬ 5 ;9-10) ಅಮೆನ್ ಹಲ್ಲೆಲೂಯ.
.